ಆಜ್ಟೆóಕ್ ಸಂಸ್ಕøತಿ-
ಸ್ಪೇನ್ ದೇಶದ ಜನರ ಆಗಮನಕ್ಕಿಂತ ಮುಂಚೆ ಮೆಕ್ಸಿಕೋದ ಸಂಸ್ಕøತಿಗೆ ಅನ್ವಯಿಸುವುದಾದರೂ ರೂಢಿಯಲ್ಲಿ ಆಗ ಅಲ್ಲಿದ್ದ ನಹುವ ಮಾತನಾಡುವ ಟೆನೋಖಸ್ ಬುಡಕಟ್ಟಿನವರಿಗೆ ವಿಶೇಷವಾಗಿ ಸಂಬಂಧಪಟ್ಟಿದೆ. ಇದು 6000 ವರ್ಷಗಳಷ್ಟು ಪ್ರಾಚೀನ ಸಂಸ್ಕøತಿ. ಈ ಜನ ಗವಿಯೊಂದರಿಂದ 1168ರಲ್ಲಿ ಹೊರಟು ಅಲ್ಲಲ್ಲಿ ಕದನವಾಡುತ್ತ ತಮ್ಮ ಕಡೆಯ ಹೆಚ್ಚು ಜನರು ಗೆದ್ದವರ ದಾಸ್ಯಕ್ಕೊಳಗಾಗಲು, ಉಳಿದವರು ಮೆಕ್ಸಿಕೊ ಸರೋವರದ ಒಂದು ದ್ವೀಪಕ್ಕೆ ಓಡಿಹೋಗಿ, ಅಲ್ಲಿ ಹಿಂದೆ ನುಡಿದ ಒಂದು ಭವಿಷ್ಯವಾಣಿಯಂತೆ, ಪಾಪಾಸುಕಳ್ಳಿಯ ಮೇಲೆ ಹಾವನ್ನು ತಿನ್ನುತ್ತಿದ್ದ ಗಿಡುಗನ ಶಕುನವನ್ನು ನೋಡಲಾಗಿ ಅಲ್ಲಿಯೇ ನೆಲೆಸಿದರು ಎಂದು ದಂತಕಥೆಯೊಂದು ತಿಳಿಸುತ್ತದೆ. ಇವರು ಕ್ರಮೇಣ ತಮ್ಮ ನೆಲೆಯನ್ನು ವಿಸ್ತರಿಸುತ್ತ ಒಂದು ಪ್ರಭಾವಶಾಲಿಯಾದ ಪ್ರಭುತ್ವವನ್ನು ಕಟ್ಟಿದರು.

   	ದಂಡನಾಯಕನಾಗಿದ್ದ ರಾಜಕುಮಾರನನ್ನೇ ರಾಜನನ್ನಾಗಿ ಆರಿಸುವುದು ಇವರ ರೂಢಿ, ರಾಜನೀತಿ. ಇವರ ಪ್ರಸಿದ್ಧ ರಾಜರುಗಳಲ್ಲಿ ಒಬ್ಬನಾದ ಅಹ್ಯುಟ್ಜಲ್ (1482-1502) ನೀರಿನ ಕಾಲುವೆಗಳನ್ನು ತೆಗೆಸಿ, ಮೆಕ್ಸಿಕೋದ ದೊಡ್ಡ ದೇವಾಲಯವನ್ನು ಕಟ್ಟಿಸಿದ. ಮಂಟೆಜûುಮನ ಕಾಲದಲ್ಲಿ ಇವರ ಅಭ್ಯುದಯ ಉನ್ನತ ಶಿಖರಕ್ಕೇರಿತ್ತು.
ನಾಲ್ಕು ದಿಕ್ಕಿನಲ್ಲೂ ಒಡ್ಡಿನ ಹಾದಿಗಳಿಂದ ಆವರಿಸಿದ್ದ ಇವರ ನಗರ ಅನೇಕ ಕಾಲುವೆಗಳಿಂದ ಛೇದಿಸಲ್ಪಟ್ಟ ಬಹು ಚತುರ್ಭುಜಾಕೃತಿಗಳಿಂದ ಕೂಡಿದ್ದು, ಮಧ್ಯದಲ್ಲಿ ದೊಡ್ಡ ಪಿರಮಿಡ್ಡಿನ ಮೇಲೆ ಒಂದು ಜೋಡಿ ದೇವಾಲಯ ಹಾಗೂ ಅದರ ಸಮೀಪದಲ್ಲಿದ್ದ ವಾಯುದೇವತೆಯ ದುಂಡು ದೇವಾಲಯಗಳಿಂದ ವಿರಾಜಿಸುತ್ತಿತ್ತು. ಟಿಯೊಪನೊಜûಲ್ಕೊನಲ್ಲಿರುವ ಸುಂದರ ದೇವಾಲಯ ಹಾಗೂ ಮಲಿನಸ್ಕೊನಲ್ಲಿರುವ ಕಮಾನಿನ ಬಾಗಿಲುಳ್ಳ ಒಂದೇ ಕಲ್ಲಿನ ದೇವಾಲಯ ಇವರ ವಾಸ್ತುಶಿಲ್ಪದ ಕುಶಲತೆಗೆ ಉತ್ತಮ ನಿದರ್ಶನಗಳು.

ಇವರ ಪಂಚಾಂಗ ಬಹಳ ತೊಡಕಿನದು. 260 ದಿವಸಗಳ ಪವಿತ್ರಕಾಲಮಾನವಲ್ಲದೆ 365 ದಿನಗಳ ಸೌರವರ್ಷಕಾಲಮಾನವೂ ರೂಢಿಯಲ್ಲಿತ್ತು. 52 ಸೌರವರ್ಷಗಳಿಗೊಮ್ಮೆ ಇವೆರಡರ ಮೊದಲ ದಿವಸಗಳು ಒಂದಾಗುತ್ತಿದ್ದವು. ಅಂಥ ದಿವಸಗಳಲ್ಲಿ ಹಿಂದೆ ತಮ್ಮ ದೇವತೆಗಳಿಂದ ಉದ್ಭವಿಸಿದ ಮಹಾ ಅನಿಷ್ಟಗಳಿಂದ ನಾಲ್ಕು ಸಲ ಪ್ರಪಂಚ ಹಾಳಾಯಿತೆಂದು ಮುಂದೆಯೂ ಭೂಕಂಪದಿಂದ ಹಾಳಾಗುವುದೆಂದು ಇವರ ನಂಬಿಕೆ. ಇವರದ್ದು ಚಿತ್ರಲಿಪಿ. ಯುಕಟಾನ್ ಬರವಣಿಗೆಯೂ ಇವರಿಗೆ ತಿಳಿದಿತ್ತು.
ಇವರು ವಿಶೇಷವಾಗಿ ನಿಸರ್ಗದ ವಿವಿಧ ಶಕ್ತಿಗಳ ಆರಾಧಕರು. ಆದರೆ ಇವರ ಆರಾಧನೆಯ ಆಚರಣೆ ಅತಿ ಅನಾಗರಿಕ, ಅಷ್ಟೇ ಅಲ್ಲ ರಾಕ್ಷಸೀಯ. ತಮ್ಮ ದೇವತೆಗಳ ತೃಪ್ತಿಗೋಸ್ಕರ ವರ್ಷದಲ್ಲೆಲ್ಲ ತುಂಬ ಚಿತ್ರಹಿಂಸೆಯಿಂದ ನರಬಲಿ ಕೊಡುತ್ತಿದ್ದರು. ಹೆಚ್ಚಾಗಿ ಅವರ ದೇವತೆಗಳು ಮಾನವ ಕಲ್ಪನೆಯಲ್ಲೇ ಅತಿ ವಿಚಿತ್ರ ಹಾಗೂ ಭಯಾನಕ ಸ್ವರೂಪವುಳ್ಳವು. ರಕ್ತಬಲಿ ಎಂದರೆ ಅವಕ್ಕೆ ಬಹುಪ್ರಿಯ. ಎಲ್ಲೋ ಒಂದೆರಡು ದೇವತೆಗಳು ಮಾತ್ರ ಉದಾರಿಗಳು, ದಯಾಪರರು.
ಇವರು ಯುದ್ಧ ಮಾಡುತ್ತಿದ್ದುದು, ಮುಖ್ಯವಾಗಿ ಬಲಿಗ್ರಹಣಕ್ಕೋಸ್ಕರ. ಹುಡುಗರಿಗೆ 15ನೆಯ ವರ್ಷದಿಂದ ಯುದ್ಧ ಶಿಕ್ಷಣಕೊಟ್ಟು 20ನೆಯ ವಯಸ್ಸಿನಲ್ಲಿ ಯುದ್ಧಕ್ಕೆ ಕಳುಹಿಸುತ್ತಿದ್ದರು. ಪ್ರತಿಯೊಬ್ಬನೂ ಒಂದು ಬಲಿಯನ್ನು ತರುವ ತನಕ ತಲೆಗೂದಲನ್ನು ಕತ್ತರಿಸುವ ಹಾಗಿರಲಿಲ್ಲ. ವಿಜಯಶಾಲಿಗೆ ಚಿರತೆ ಅಥವಾ ಗಿಡುಗನ ಚರ್ಮವನ್ನು ಧರಿಸುವ ಗೌರವವಿರುತ್ತಿತ್ತು. ಪರಾಜಿತನನ್ನು ಸೈನ್ಯದಿಂದ ತೆಗೆದುಹಾಕಿ ಅವಮಾನಕ್ಕೀಡುಮಾಡುತ್ತಿದ್ದರು.

ಬಲು ಎಚ್ಚರಿಕೆಯಿಂದ ನಿಯಮಬದ್ಧವಾಗಿ ನಡೆಯುತ್ತಿದ್ದ ಇವರ ಸಂತೆಯಮಾಳ ಟ್ಲಟೆಲೊಲ್ಕೊ ಎಂಬಲ್ಲಿತ್ತು. ವಸ್ತ್ರಾಭರಣಗಳಿಗೆ ಖಾಷ್‍ಕಲ್ಲು, ಸಮುದ್ರದ ಚಿಪ್ಪು, ಗರಿ ಮುಂತಾದುವುಗಳನ್ನು ದೂರ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದರು. ಉತ್ತಮ ಕಲ್ಲುಗೆಲಸದಲ್ಲೂ ಚಿನ್ನ ಎರಕ ಹುಯ್ಯುವುದರಲ್ಲೂ ಮತ್ತು ವಿವಿಧ ವರ್ಣದ ಗರಿಗಳನ್ನು ಟರ್ಕಿಯೋeóïಕಲ್ಲಿನ ಚೂರುಗಳನ್ನು ಜೋಡಿಸುವ ಸುಂದರ ಕಲಾತ್ಮಕ ಕೆಲಸಗಳಲ್ಲೂ ಇಲ್ಲಿನ ಕಾರ್ಮಿಕರು ನಿಪುಣರಾಗಿದ್ದರು.
ಸಂಚಾರ ವ್ಯವಸ್ಥೆ, ಜನಗಣತಿಯ ಕ್ರಮ, ರಾಜನೀತಿ, ನ್ಯಾಯತೀರ್ಮಾನ, ಸಮಾಜದಲ್ಲಿ ಸ್ತ್ರೀಯರಸ್ಥಾನ, ಮದುವೆ ಕಟ್ಟಳೆ, ಕಡ್ಡಾಯ ಶಿಕ್ಷಣ-ಈ ಮೊದಲಾದುವು ಬಹಳ ಸುಧಾರಿಸಿದ್ದು ಆ ಭಾಗದ ಪ್ರಪಂಚದಲ್ಲೇ. ಇವರು ಹೆಚ್ಚಿನ ಮಟ್ಟದ ಸಂಸ್ಕøತಿಯುಳ್ಳವರಾಗಿದ್ದರು.

   ಕೋರ್ಟ್eóïನ ನೇತೃತ್ವದಲ್ಲಿ ಸ್ಪೇನಿನವರ (1519) ಕ್ರೂರ ಆಕ್ರಮಣ ಪ್ರಾರಂಭವಾದ ಮೇಲೆ ಇವರ ನಗರ ಹಾಳಾಯಿತಲ್ಲದೆ ಸಂಸ್ಕøತಿ ನಾಶಹೊಂದಿತು. 					   		            
(ಜಿ.ವಿ.ಆರ್.; ಎ.ಎಸ್..)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ